ನಿನ್ನ ಕರೆಗೆ ಓಗೊಡಲೇ?

picasso

ನಿನ್ನ ಕರೆಗೆ ಓಗೊಡಲೇ?

ನೂರು ನೋಂಪಿನಲಿ
ಸಾವಿರ ಸೊಂಪಿನಲಿ
ನಾ ಕಾಣ್ವ ನೆನಪಿನಲಿ
ನಿನ್ನದೇ ಝಳಪು!

ಸೊರಗಿದ ಯಮುನೆಯಲಿ
ಕೊಳೆತು ಬೇಯುವ ಗಂಗೆಯಲಿ
ಕರಗುವ ಕಣಿವೆಗಳಲಿ
ಇಣುಕುವುದು ನಿನ್ನದೇ ಹರವು!

ಸುರಿವ ಬೇಸಿಗೆಯಲಿ
ಸುಡುಸುಡುವ ಬೇಗೆಯಲಿ
ಮೊರೆಯದ ಮೋಡಗಳಲಿ
ಕರೆಯುತ್ತವೆ ನಿನ್ನವೇ ಕರಗಳು!!

ಮೂಕವಾಗಿವೆ ಉಲಿವ ಹಕ್ಕಿಗಳು
ನರಕವಾಗಿದೆ ಎದೆ ಬಯಲು

ವೀರಣ್ಣ ಕಮ್ಮಾರ
||

2 Responses to “ನಿನ್ನ ಕರೆಗೆ ಓಗೊಡಲೇ?”

  1. renuka Says:

    ಕವಿತೆ ತುಂಬಾ ಇಷ್ಟವಾಯಿತು ವೀರಣ್ಣಾ.
    ಹೀಗೇ ಬರೆಯುತ್ತೀರಿ..

  2. ರಂಜಿತ್ Says:

    ನರಕವಾಗಿದೆ ಎದೆಯ ಬಯಲು..!!

    ಚೆನ್ನಾಗಿದೆ ಸರ್‍!

Leave a Reply