ಚೀಯರ್ ಚೀಯರ್ಸ್

ಮೈ ಮಾಟದ ಮೊನಚುಗಳಿಗೆ

ಬೆಲೆವೆಣ್ಣುಗಳ ಬಣ್ಣಗಳಿಲ್ಲ

ಕೈ ಕಾಲುಗಳ  ಆಕ್ರೊಬ್ಯಾಟ್ ಗೆ

ಶೃಂಗಾರದ ಹಂಗಿಲ್ಲ

 

ಕೂಗಿ ಕೆರಳಿಸೊ ನಗುವಿಗೆ

ಕೊರಳ ಹೂಂಕಾರಕ್ಕೆ

ಬಣ್ಣ ಬಣ್ಣದ ಪೋಷಾಕಿಗೆ

ತುಂಡು ಲಂಗದ ಅಧಾ೵ಗಸಕೆ

ಬೌಂಡರಿಗೋಡುವ ಚೆಂಡಿನ ಖುಷಿಯಿಲ್ಲ!!

 

ಬಾಲ್ ಎಸೆವ ತಿರುಗಣಿಗೆ

ಬ್ಯಾಟ್ ಬೀಸುವ ಸುನಾಮಿಗೆ

ಸ್ಪಂದಿಸುವ ಭರದಲ್ಲಿದ್ದರೆ

ಈ ನುಣುಪು ಮೈ-ದಾನಗಳ

ಗಾನ ಕೋಲಾಹಲ ಚಿಮ್ಮುತ್ತಿದೆ

ಟಿ.ವಿ. ಪರದೆಯ ತುಂಬ!!

 

ಕುಣಿವ ರಭಸಕೆ ಸೆಟೆವ ಎದೆ

ಕಟಿಯ ಹೊರಳಾಟಕೆ ಏರುವ ಹೆದೆ

ಬಳುಬಳುಕುವ ಮೋಹದ ಬಲೆ

ಈ ಸೆಳವಿಗೆ ಸಿಕ್ಕ ಆಟದ ಕಗ್ಗೊಲೆ!!

 

ಆಟದ ಮಾಟದಲಿ ಇನ್ನೊಂದಾಟ

ತುಂಡು ಲಂಗದ ತುಂಡು ತುಂಟಾಟ

ಯಾರದೋ ಥೈಲಿ ತುಂಬಿಸೊ ಆಟ

ಇದೋ ಬಂದಿದೆ ಹೊಸ ಪರಿಪಾಠ

-0-

Advertisements

One Response to ಚೀಯರ್ ಚೀಯರ್ಸ್

 1. ವಿಕಾಸ್ ಹಗಡೆ ಹೇಳುತ್ತಾರೆ:

  ವೀರಣ್ಣರವರಿಗೆ ನಮಸ್ತೆ,

  ಇಂದಿನ ಕ್ರಿಕೆಟ್ಟಿನ ಪರಿಸ್ಥಿತಿಯ ಬಗ್ಗೆ ಕೆಲವೇ ಸಾಲುಗಳಲ್ಲಿ ಚೆನ್ನಾಗಿ ಹೇಳಿದ್ದೀರ.
  ಹ್ಮ್.. ನಿಜ. ಯಾರದೋ ಥೈಲಿ ತುಂಬಿಸೊ ಆಟ ಇದು. ಜನ ಮೂರ್ಖರು.

  ಬರೆಯುತ್ತಿರಿ.

  -ವಿಕಾಸ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: